ತಲ್ಲಣಿಸದಿರು ಕಂಡ್ಯ
Tallanisadiru Kandya
ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.
Tallanisadiru kandya talu manave, ellaranu salahuvanu idake samshayavilla.
हे मन, घबराओ मत, धीरज रखो। वह सबका पालन करता है, इसमें कोई संदेह नहीं।
ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ, ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ, ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು, ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ.
Bettada tudiyalli huttida vrikshakke, katteyanu katti neereredavaru yaro, puttisida deva ta honegaranagiralu, gattyagi salahuvanu idake samshayavilla.
पहाड़ की चोटी पर उगे पेड़ के लिए थाला बनाकर किसने पानी दिया? जब उसे पैदा करने वाला भगवान ही ज़िम्मेदार है, तो वह मज़बूती से उसकी रक्षा करता है, इसमें कोई संदेह नहीं।
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ, ಅಡಿಗಡಿಗೆ ಆಹಾರವಿತ್ತವರು ಯಾರೊ, ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ, ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ.
Adaviyolagaduva mrigapakshigaligella, adigadige aharavittavaru yaro, padeda jananiya teradi Swami honegeedagi, bidade rakshipanidake sandeha beda.
जंगल में घूमते सभी पशु-पक्षियों को कदम-कदम पर भोजन किसने दिया? जन्म देने वाली माँ की तरह स्वामी ज़िम्मेदारी लेकर बिना चूके उनकी रक्षा करते हैं, इसमें संदेह मत करो।
ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ, ಅಲ್ಲಲ್ಲಿಗೆ ಆಹಾರವಿತ್ತವರು ಯಾರೊ, ಬಲ್ಲಿದನು ಕಾಗಿನೆಲೆಯಾದಿಕೇಶವರಾಯ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.
Kallolage hutti kuguva kappegaligella, allallige aharavittavaru yaro, ballidanu Kagineleyadikeshavaraya, ellaranu salahuvanu idake samshayavilla.
पत्थरों के भीतर पैदा होकर टर्राने वाले मेंढकों को जहाँ-तहाँ भोजन किसने दिया? बलवान कागिनेले के आदिकेशवराय सबका पालन करते हैं, इसमें कोई संदेह नहीं।