ಆಚಾರವಿಲ್ಲದ ನಾಲಿಗೆ
Acharavillada Nalige
ಆಚಾರವಿಲ್ಲದ ನಾಲಿಗೆ ನಿನ್ನ, ನೀಚಬುದ್ಧಿಯ ಬಿಡು ನಾಲಿಗೆ.
Acharavillada nalige ninna, neechabuddhiya bidu nalige.
अरे बिना आचार वाली जीभ, अपनी नीच बुद्धि छोड़ दे, जीभ।
ವಿಚಾರವಿಲ್ಲದೆ ಪರರ ದೂಷಿಪುದಕ್ಕೆ, ಚಾಚಿಕೊಂಡಿರುವಂಥ ನಾಲಿಗೆ.
Vicharavillade parara dushipudakke, chachikondiruvantha nalige.
बिना सोचे दूसरों की निंदा करने के लिए हमेशा बाहर निकली रहने वाली जीभ।
ಪ್ರಾತಃಕಾಲದೊಳೆದ್ದು ನಾಲಿಗೆ, ಸಿರಿಪತಿಯೆನ್ನಬಾರದೆ ನಾಲಿಗೆ, ಪತಿತಪಾವನ ನಮ್ಮ ರತಿಪತಿಜನಕನ, ಸತತವು ನುಡಿ ಕಂಡ್ಯ ನಾಲಿಗೆ.
Pratahkaladoleddu nalige, Siripatiyennabarade nalige, patitapavana namma Ratipatijanakana, satatavu nudi kandya nalige.
अरे जीभ, सुबह उठकर क्या तू ‘लक्ष्मीपति’ नहीं कह सकती? पतितों को पावन करने वाले, कामदेव के पिता हमारे प्रभु का नाम सदा बोल, जीभ।
ಚಾಡಿ ಹೇಳಲಿಬೇಡ ನಾಲಿಗೆ ನಿನ್ನ, ಬೇಡಿಕೊಂಬುವೆನು ನಾಲಿಗೆ, ರೂಢಿಗೊಡೆಯ ಶ್ರೀರಾಮನ ನಾಮವ, ಪಾಡುತಲಿರು ಕಂಡ್ಯ ನಾಲಿಗೆ.
Chadi helalibeda nalige ninna, bedikombuvenu nalige, rudhigodeya Shriramana namava, padutaliru kandya nalige.
चुगली मत कर, जीभ, मैं तुझसे विनती करता हूँ। जगत के स्वामी श्रीराम का नाम गाती रह, जीभ।
ಹರಿಯ ಸ್ಮರಣೆ ಮಾಡು ನಾಲಿಗೆ, ನರಹರಿಯ ಭಜಿಸು ಕಂಡ್ಯ ನಾಲಿಗೆ, ವರದ ಪುರಂದರವಿಠಲರಾಯನ, ಚರಣಕಮಲವ ನೆನೆ ನಾಲಿಗೆ.
Hariya smarane madu nalige, Narahariya bhajisu kandya nalige, varada Purandaravitthalarayana, charanakamalava nene nalige.
हरि का स्मरण कर, जीभ; नरहरि का भजन कर, जीभ; वरदायक पुरंदर विट्ठलराय के चरण-कमलों को याद कर, जीभ।